Thursday, February 19, 2009

ಮುರಿದು ಬಿದ್ದ ಕೊಳಲು

ಅವಳು ಉದುತ್ತಿದ್ದಳು ಕೊಳಲು
ತುಟಿಯಂಚಿನಲ್ಲಿ ತನ್ನ ಒಲವ
ಸ್ವರವ ತುಂಬಿ .....!!
ಅವಳೂದುವ ರಭಸಕ್ಕೆ
ಅವಳ ಭಾವದ ಬಿಸಿ ಉಸಿರಿಗೆ
ಅವಳೆದೆಯ ತಲ್ಲಣದ ಏರಿಳಿತಕ್ಕೆ
ಕಳೆದು ಹೋದ ಕನಸಿನ ಕಣಿವೆಯ
ಕಾವಲೊಳಗೆ ನೆನೆ ನೆನೆದು
ಮುರಿದು ಬಿದ್ದಿದೆ ಕೊಳಲು
ಕೇಳುವವರಿಲ್ಲ ಪಾಪ ಅದರ ಅಳಲು...!!

2 comments:

  1. ನೀವು ಶರಧಿಗೆ ಭೇಟಿ ನೀಡಿದ್ದು ತುಂಬಾ ಸಂತೋಷ..ಪುಟ್ಟಿ ಅಂತ ಕರೆದಿರುವಿರಿ..ನಿಮ್ಮ ಪ್ರೀತಿಯ ಪುಟ್ಟಿ ಕರೆಗೆ ನಾ ಚಿರಋಣಿ. 'ಮುರಿದು ಬಿದ್ದ ಕೊಳಲು' ಕವನ ತುಂಬಾನೇ ಚೆನ್ನಾಗಿದೆ..ಆದರೆ ಕವನ ಬರೆಯಲು ಬಾರದ, ಅದರಲ್ಲಿರುವ 'ಕಾವ್ಯರಸಧಾರೆ'ಯನ್ನು ಅನುಭವಿಸಲು ಮಾತ್ರ ಗೊತ್ತಿರುವ 'ಪುಟ್ಟಿ'ಗೆ ಚೆನ್ನಾಗಿದೆ ಅಂತ ಮಾತ್ರ ಹೇಳೋಕೇ ಗೊತ್ತು.ನನಗೆ 'ಜೀವಾ' ಹೊಸತು..ಇನ್ನಷ್ಟು ಬರೆಯಿರಿ. ಓದೋಕೆ, ಖುಷಿಪಡೋಕೆ, ಬರಹ ನೋಡಿ ಸಿಟ್ಟು ಬಂದ್ರೆ ಪ್ರೀತಿಯಿಂದ ಬೈಯೋಕೆ ನಾವು ಇದ್ದೇ ಇದ್ದೆವಲ್ಲ..ಶುಭವಾಗಲಿ.
    -ಪ್ರೀತಿಯಿಂದ,
    ಪುಟ್ಟಿ

    ReplyDelete
  2. ವಿಶಾಲಾ...

    ಸರಳ..ಭಾಷೆ..
    ವ್ಯಕ್ತವಾಗುವ ಭಾವ..
    ಮನ ತಟ್ಟುತ್ತದೆ..

    ಚಂದವಾದ ಕವನಕ್ಕೆ

    ಅಭಿನಂದನೆಗಳು..

    ReplyDelete